ಟೈತೋನಿಯ
ಕಂಪಾಸಿûಟೀ (ಆಸ್ಟರೇಸೀ) ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಮೆಕ್ಸಿಕೊ, ಮಧ್ಯ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‍ಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುದು. ಅಂದವಾದ ಹೂ ಬಿಡುವುದರಿಂದ ಉದ್ಯಾನಗಳಲ್ಲಿ ಬೆಳೆಸುವರು. ಮೆಕ್ಸಿಕನ್ ಸನ್‍ಫ್ಲವರ್ ಪರ್ಯಾಯನಾಮ. ಇದೊಂದು ವಾರ್ಷಿಕ ಮೂಲಿಕೆ. ಕೆಲವೊಮ್ಮ ಪೊದೆಯಾಗಿ ಬೆಳೆಯುವುದೂ ಉಂಟು. ಸಾಮಾನ್ಯವಾಗಿ ಇದರ ಎತ್ತರ 3'-6'. ಎಲೆಗಳು ಸರಳ ಮಾದರಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯಲಗು ಅಖಂಡವಾಗಿರಬಹುದು ಇಲ್ಲವೆ 3 ಹಾಲೆಗಳಾಗಿ ವಿಂಗಡಗೊಂಡಿರಬಹುದು. ಎಲೆಯ ಅಂಚುದಂತಿತ. ಹೂಗೊಂಚಲು ಚಂಡುಮಂಜರಿ ಮಾದರಿಯದು; ಹೂಗೊಂಚಲಿನ ಅಂಚಿನಲ್ಲಿ ಬಂಜೆಗಳಾದ ಕದಿರುಪುಷ್ಪಕಗಳೂ ಕೇಂದ್ರಭಾಗದಲ್ಲಿ ದ್ವಿಲಿಂಗಿಗಳಾದ ಬಿಂಬಪುಷ್ಟಕಗಳೂ ಇವೆ. ಹೂಗಳ ಬಣ್ಣ ಹಳದಿ, ಕಿತ್ತಳೆ ಇಲ್ಲವೆ ಕಡುಗೆಂಪು.

 ಟೈತೋನಿಯದಲ್ಲಿ ಸುಮಾರು 10 ಪ್ರಭೇದಗಳಿವೆ. ಇವುಗಳಲ್ಲಿ ಡೈವರ್ಸಿಫೋಲಿಯ ಮತ್ತು ಸ್ಪೀಷಿಯೋಸಗಳು ಮುಖ್ಯವಾದವು
(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ